ಭಾವನೆ
ಬಾಡಿದ ಮೊಗದಲ್ಲಿ, ಸಿಹಿ ಸಕ್ಕರೆಯ ತಾರಯ್ಯ
ಕುಣಿಯುವ ಕಾಲಿಗೆ, ಗೆಜ್ಜೆಯ ಕಟ್ಟಯ್ಯ ನಂದಗೊಪನೆ!!!
ಬರುವೆಯ ಬರಿದಾದ ಮನದಲ್ಲಿ
ನೀರಿನ ಸೆಲೆಯಾಗಿ, ಎಂಬಿ ಭಾವನೆ
ಸುಂದರ, ಸುಕೋಮಲ, ಸಿರಿನೂತನ - ಆನಂದ ನಂದನ
Showing posts with label ಭಾವನೆ. Show all posts
Showing posts with label ಭಾವನೆ. Show all posts
ಸ್ನೇಹ
ಕನಸಿನ ಜೊತೆಯಲಿ ನಡೆದ ಸಂಘರ್ಷದಲಿ
ಗೆದ್ದ ನನ್ನ ಮನಕೆ ಆಗಿದೆ ರೋಮಾಂಚನ
ಒಡೆದ ಮನದ, ನಗುವಿನ ಅಲೆ ,
ಮನದಾಳದ ಭಾವನೆಗಳನು ಅಪ್ಪಿದ ನಿನ್ನ ಹೃದಯಕೆ
ನನ್ನ ಸ್ನೇಹ ಸಿಂಚನ - ಆನಂದ ನಂದನ
ಕೊನೆಯ ದಿನಗಳು
ಪ್ರೀತಿಯ ತಾತ್ಪರ್ಯವ ಅರಿಯದ ಜಗದಲ್ಲಿ ಬೆಂದು,
ಕಡೆಗೂ ಸಿಗದೇ, ಹಿಡಿದ ಹಠವ ಸಾದಿಸಿ ಮರೆಯಾದೆ.
ಸುಕೋಮಲ ಮನಸ್ಸಿನ ಭಾವನೆಗಳನ್ನು ಅರಿಯದ ಜಗದಲ್ಲಿ,
ಹುಡುಕಿದೆ ಇಲ್ಲದ ಪ್ರೀತಿಯ, ಕಾಣದಾದೆ ನೆಮ್ಮದಿಯ,
ಕರೆ ಬಂದಿದೆ ನನಗೆ, ಹಿಂತಿರುಗೆಂದು ಅಭಿಮಾನ ಭಂಗವಾದ ಸಂದರ್ಬದಲ್ಲಿ,
ತೆಗೆದು ಕೊಂಡ ತೀರ್ಮಾನ ಸರಿಯಾದುದೆಂದು,
ಕಾಲದ ಕರೆಗೆ ಓ ಗೊಟ್ಟು ನನ್ನ ಮನೆಯೆಡೆಗೆ - ಆನಂದ ನಂದನ
ನನ್ನ ಮನ
ನನ್ನ ಮನದ ನವಿರಾದ ಭಾವನೆಗಳ ಕೂಗು
ಕೆಳಿತೆ ನಿನಗೆ? ಅದರ್ಥವ ಬಲ್ಲೆಯಾ ನೀನು?
ಕಳೆದು ಹೋದ ಯಾತನಮಯ ಸಂದರ್ಬವ ನೆನೆದು,
ಬತ್ತಿಹೋದ ಬಾವಿಯಾನ್ತಗಿದೆ, ನನ್ನ ಹೃದಯ
ಕೇಳಿಯೂ ಕೇಳದೆ ಬಂದ ನಿನ್ನ ಸ್ನೇಹದ ಜ್ಯೋತಿಯ ನಂದಿಸಿ
ಕತ್ತಲೆಯ ಮಡಿಲಲ್ಲಿ ಕೆಡವಿದೆಯಾಕೆ??? - ಆನಂದ ನಂದನ
Subscribe to:
Posts (Atom)
