ನನಗೆ ಇಷ್ಟವಾದ ಸಾಲುಗಳು

"ಪ್ರಪಂಚ ಎಂಬುದರಲ್ಲಿ ನಾನೊಂದು ಚಿಕ್ಕ ಜೀವ.....ಆದ್ರೆ ನನ್ನನ್ನು ಪ್ರೀತಿಸುವ ಯಾವುದೋ ಒಂದು ಜೀವಕ್ಕೆ "ನಾನೇ" ಪ್ರಪಂಚ"

"ನಮ್ಮವರು ನಮಗಿಲ್ಲ ನಮಗೆ ನಾವೇ ಎಲ್ಲ ಕಟ್ಟಕಡೆಗೆ"


"ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೆ ಜೀವನ"

"ಕಾಣದ ಕಡಲಿಗೆ ಹಂಬಲಿಸಿದೆ ಮನ
ಎಲ್ಲಿರುವುದೋ ಅದು, ಎಂತಿರುವುದೋ ಅದು,
ನೋಡಬಲ್ಲೆನೆ ಒಂದು ದಿನ,
ಕಡಲನು, ಕೂಡಬಲ್ಲೆನೇ ಒಂದು ದಿನ"

"ದೀಪವೂ ನಿನ್ನದೇ,
ಗಾಳಿಯು ನಿನ್ನದೇ,
ಆರದಿರಲಿ ಬೆಳಕು.....

ಕಡಲೂ ನಿನ್ನದೇ,
ಹಡಗೂ ನಿನ್ನದೇ,
ಮುಳುಗದಿರಲಿ ಬದುಕು...."


"ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುತ, ನಗಿಸುತಲೆಲ್ಲರ ಮಿಗೆ ಬೇಡಿಕೊಳ್ಳೋ ಮಂಕುತಿಮ್ಮ/ತಿಮ್ಮಿ"


"'ರವಿ ಕಾಣದ್ ಕವಿ ಕಂಡ'
ಅಂದ್ರೆ ಕವಿಗೊಳ್ ತತ್ವ-
'ಕವಿ ಕಾಣದ್ ಕುಡಕ ಕಂಡ'
ಅನ್ನೊದ್ ಕುಡಕರ್ ಮಾತ್ವ"


"ಯಾರೂ ಅರ್ಜಿ ಹಾಕ್ಕಂಡ್ ಹುಟ್ಟಾಕಿಲ್ಲ, ಹುಟ್ಟುದ್ ಮ್ಯಾಲೆ ನ್ಯಯ್ವಾಗ್ ಬದುಕ್ಬೇಕು,ನಾಕ್ ಜನಕ್ಕೆ ಒಳ್ಳೇದ್ ಮಾಡ್ಬೇಕು"


"ಸೋಲಿನಲ್ಲೂ ಖುಷಿ ಇರೋದು ಪ್ರೀತಿಯಲ್ಲಿ ಮಾತ್ರ"


ಸಾಲುಗಳು ಗೆಳೆರಾಯರ Profileನಲ್ಲಿ Copy ಮಾಡಿದ್ದು

No comments: