ಪಯಣ
ಯಾರು ಯಾರಿಗಾಗಿ ಪಯಣಿಸ ಬೇಕು???, ನಡೆ ನಿನ್ನ ದಿಕ್ಕಿನೆಡೆಗೆ
ಹನಿಹನಿಯಾಗಿ ಪುಟಿಯುವ ಬಿಸಿ ರಕ್ತದ ಒಕುಳಿಯೋಳು.
ನಿನ್ನ ದಾರಿಯೊಳು ಸರಾಗವಾಗಿ, ನವ್ಯತೆಯ ರಣರಂಗಕ್ಕೆ.
ನಿನ್ನ ಕಣ್ಣಿನೊಳಗೆ ತುಂಬಿಕೋ, ಪ್ರೀತಿಯ ಪ್ರತಿಬಿಂಬವ.
ನಿನ್ನ ಪ್ರಾಣದ ಜ್ಯೋತಿಯ ಬೆಳಗಿಸಿ, ನಿತ್ರಾಣಗೊಳ್ಳದೆ.
ಯಾರ ಹಂಗೂ ಇಲ್ಲದೆ, ಭಾವನೆಯನು ಅನುಭವಿಸಿ,
ಅದನು ಹೊರಗಡೆ ಮಿಡಿಯದೆ, ಬೆಂಬೆತ್ತಿ ಬಂದಿಸಿ,
ನಿನ್ನ ಜೀವಕ್ಕೆ ಬೆರಸಿ, ಮನಕೆ ತಂಪನ್ನೆರೆ - ಆನಂದ ನಂದನ

No comments:
Post a Comment