ಧರ್ಮ-ಮತ

ಧರ್ಮ ಪದ "ದೃ" ಧಾತುವಿನಿಂದ ಬಂದಿದೆಯಂತೆ! ಈ ಧಾತುವಿಗೆ to sustain; carry, hold ಎಂಬ ಅರ್ಥ ಇದೆ ಅಂತೆ.

"ಧಾರಣಾತ್ ಧರ್ಮಮಿತ್ಯಾಹು, ಧರ್ಮೋ ಧಾರಯತೇ ಪ್ರಜಾ:"!
ಎತ್ತಿ ಹಿಡಿಯುವುದರಿಂದ ಅದು ಧರ್ಮ!. ಅದು ಪೀಳಿಗೆಯನ್ನು ಕಾಪಡುತ್ತೆ

"ಧರತಿ ಲೋಕಂ ಇತಿ ಧರ್ಮ:"
ಲೋಕವನ್ನು ಯಾವುದು ಕಾಪಾಡುತ್ತೋ ಅದು ಧರ್ಮ!

ಹಾಗಾದ್ರೆ ಯಾವುದು ಧರ್ಮ?? ಅಂದ್ರೆ ಅದು ಅವರ ಸಂಸ್ಕೃತಿ, ವೈಚಾರಿಕತೆ, ನಂಬಿಕೆ ಮೇಲೆ ಬಿಟ್ಟಿದ್ದು.
ಕೆಲವರ ಪರಕಾರ "ಸತ್ಯಾನ್ನಾಸ್ತಿ ಪರೋಧರ್ಮಃ" . ಸತ್ಯಕ್ಕಿಂತ ಬೇರೆ ಧರ್ಮವಿಲ್ಲ ಅಂತ. ಅದು ಅವರ ನಂಬಿಕೆ. ಎಲ್ರೂ ಒಪ್ಲೇ ಬೇಕಿಲ್ಲ .
ಬಸವಣ್ಣ ಹೇಳಿದ್ದು "ದಯವೇ ಧರ್ಮದ ಮೂಲವಯ್ಯ!"

( ಸಕ್ಕದ ಬಲ್ಲವರು ಮೆಲಿನವುಗಳಲ್ಲಿನ ತಪ್ಪುಗಳನ್ನು ಸರಿಪಡಿಸಬಹುದು! )

ಮೇಲಿನ ನಂಬಿಕೆಗಳನ್ನು ಉಳಿಸಿಕೊಳ್ಳಲು ಕೆಲವು ಆಚರಣೆಗಳು ಬೇಕಾಗುತ್ತೆ . ಈ ನೀತಿ ನಿಯಮ ಆಚರಣೆಗಳೇ
ಮುಖ್ಯವಾಗಿರುವ ಭಾಗಕ್ಕೆ ನಾವು ಮತ ಅನ್ನಬಹುದು. ಈ ಧರ್ಮ ಅತ್ವ ನಂಬಿಕೆಗಳಿಗೆ ಕಟ್ಟು ನಿಟ್ಟಿನ ಆಚಾರವನ್ನು ವಿಧಿಸಿದರೆ ಅದು ಮತಗಳಾಗುತ್ತೆ.
ಈ ನಂಬಿಕೆಗಳ / ಧರ್ಮದ ಬಗ್ಗೆ... ನಮ್ಮ ನಮ್ಮ "ಮತಿ" ಗೆ ಅನುಸಾರವಾಗಿ ಮತವಾಗುತ್ತೆ.

ritualistic ಆಗಿರೋದು religion.
spiritualistic ಆಗಿರೋದು ಧರ್ಮ ಅಂತಾರೆ.
ಕೆಲವರು ಧರ್ಮಕ್ಕೆ ಇಂಗ್ಲೀಷಿನಲ್ಲಿ righteousness ಅಂತ ಕರೀಬಹುದು ಅಂತಾರೆ .

ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ ......

ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ ರೀತಿಯಲ್ಲೇ ಬಳಕೆಯಾಗಿದೆ.
ನನಗೆ ಮತಕ್ಕೂ ಧರ್ಮಕ್ಕೂ ರಿಲಿಜನ್ ಗೂ ಈಗಿನ/ಹಿಂದಿನ ಬಳಕೆಯಲ್ಲಿ ಏನೂ ವ್ಯತ್ಯಾಸ ಕಾಣ್ತಾ ಇಲ್ಲ.

ಮತದ ಬಗ್ಗೆ ಗೊಂದಲಯಾಕೆ ಅಂತಾನೇ ನನಗೆ ಅರ್ಥವಾಗ್ತಾಇಲ್ಲ.
ನಿಮ್ಮ ಮತ ಯಾರಿಗೆ? ಅನ್ನೋ ಮತಕ್ಕೂ ಧರ್ಮದ ಒಟ್ಟೊಟ್ಟಿಗೆ ಜೋಡಿಸುವ ಮತಕ್ಕೂ ಒಂದೇ ಅರ್ಥ.ಮತ ಎಂದರೆ ಅಭಿಪ್ರಾಯ,ತತ್ವ,ಸಿದ್ಧಾಂತ ಎಂಬ ಅರ್ಥಗಳು. ತತ್ವಸಿದ್ಧಾಂತ ಎಂದಾಗ ಅದನ್ನು ಹೇಳುವ ಒಬ್ಬ ಪ್ರವಾದಿ ಬೇಕು, ಒಂದು ಗ್ರಂಥ ಬೇಕು, ಅದನ್ನು ನಂಬುವ ಜನರು ಆಮತದವರಾಗುತ್ತಾರೆ. ಶಂಕರಾಚಾರ್ಯರು ಅಧ್ವೈತ ಸಿದ್ಧಾಂತ ಬೋಧಿಸಿದರು, ಅವರ ಅನುಯಾಯಿಗಳು ಅಧ್ವೈತಿಗಳು. ಏಸುಕ್ರಿಸ್ತ ಕ್ರೈಸ್ತ ತತ್ವ ಬೋಧಿಸಿದರು, ಅವರ ಅನುಯಾಯಿಗಳು ಕ್ರೈಸ್ತರು. ಮೊಹಮದ್ ಪೈಗಂಬರ್ ಇಸ್ಲಾಮ್ ತತ್ವ ಬೋಧಿಸಿದರು, ಅವರ ಅನುಯಾಯಿಗಳು ಮುಸಲ್ಮಾನರು. ಹಾಗೆ ಹಿಂದು ಎಂಬ ವಿಚಾರವನ್ನು ರಾರೂ ಒಬ್ಬ ಪ್ರವಾದಿ ಬೋಧಿಸಲಿಲ್ಲ. ಹಾಗಾಗಿ ಅದು ಮತವಲ್ಲ. ಹಿಂದು ದೇಶದಲ್ಲಿರುವವರು ಎಲ್ಲರೂ ಹಿಂದುಗಳೇ. ಅವರು ಕ್ರೈಸ್ತರಾದರೇನು? ಮುಸಲ್ಮಾನರಾದರೇನು? ಅಧ್ವೈತಿಗಳಾದರೇನು? ಧ್ವೈತಿಗಳಾದರೇನು? ಬೌದ್ಧರಾದರೇನು? ಜೈನ ರಾದರೇನು? ಹಿಂದುಪದವನ್ನು ಭಾರತೀಯ ಎಂಬ ಅರ್ಥದಲ್ಲೇ ಬಳಸಬೇಕು. ಹಿಂದು ಎನ್ನುವುದು ಬೇಡವೆಂದರೆ ಭಾರತೀಯ ಎಂದರೂ ತಪ್ಪಿಲ್ಲ. ಭಾರತದೇಶವಾಸಿ ಭಾರತೀಯ. ಹಿಂದು ದೇಶವಾಸಿ ಹಿಂದು, ಅಷ್ಟೆ.
ಆದರೆ ಹಿಂದು ಪದಕ್ಕೆ ಆಗುತ್ತಿರುವಷ್ಟು ಗೊಂದಲ ಬೇರೆ ಯಾವ ಪದಕ್ಕೂ ಇಲ್ಲ. ಇದು ಕೇವಲ ರಾಜಕಾರಣದ ಹಿನ್ನೆಲೆಯಿಂದ.

ಸನಾತನಸ್ಯ ಧರ್ಮ ಇತಿ ಸನಾತನ ಧರ್ಮಃ
ಯಾರಿಗೆ ತನ್ನ ಧರ್ಮ ತಿಳಿದಿರುತ್ತದೋ ಅವನು ಬೇರೆ ಧರ್ಮಗಳನ್ನು ಅರಿಯಬಲ್ಲ. ಒಬ್ಬನಿಗೆ ಬೇರೆ ಧರ್ಮ ಅರಿವಾಗದ್ದಿದರೆ ತನ್ನ ಧರ್ಮವನ್ನು ಮತ್ತೆ ಓದಬೇಕು ಎಂದಸ್ಟೆ

No comments: