ಭಾರತೀಯರೇ ಇಲ್ಲದ ಭಾರತ
ಒಬ್ಬ ಏಲಿಯನ್ ಮಂಗಳ ಗ್ರಹದಿಂದ ಭೂಮಿಗೆ ಬಂದ. ಬರುವ ಮೊದಲು ಮಂಗಳ ಗ್ರಹದಲ್ಲಿ ಇಳಿದಿದ್ದ ಮನುಷ್ಯನೊಬ್ಬನ ಜೊತೆ ಭೂಮಿಯ ಬಗ್ಗೆ ತಿಳಿದುಕೊಂಡು ಬಂದಿದ್ದ.
ಮನುಷ್ಯನನ್ನು ಮಾತಾಡಿಸಿಕೊಂಡೇ ಹೋಗಬೇಕು ಎಂದು ಆತ ತೀರ್ಮಾನಿಸಿದ್ದ.
ಭೇಟಿಯ ನಂತರ ಮಂಗಳ ಗ್ರಹಕ್ಕೆ ಹಿಂತಿರುಗಿದೆ.
ಗೆಳೆಯ ಕೇಳಿದ ಹೇಗಿತ್ತು ಟ್ರಿಪ್ಪು? ಏಲಿಯನ್ ಹೇಳಿದ, “ ಭೂಮಿಯ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್ರೀತಿ, ಅಮೋಘ ಇತಿಹಾಸ, ಶಿಲ್ಪಿ ಕಲೆ, ಅಲ್ಲಿನ ನೈಸರ್ಗಿಕ ಸಂಪತ್ತು,ವಾವ್! ಎಲ್ಲವು ಅದ್ಭುತ"
"ಅದು ಖುಷಿಯ ವಿಚಾರ, ಸರಿ 'ಮನುಷ್ಯರ' ಬಗ್ಗೆ ನಿನಗೆ ಏನನ್ನಿಸಿತು?"
"ಮನುಷ್ಯರು!?ಯಾರದು??, ನನಗೆ ಒಬ್ಬನೇ ಒಬ್ಬ ಮನುಷ್ಯ ಸಿಗಲಿಲ್ಲ "
"ಏನು ಭೂಮಿಯಲ್ಲಿ,ಮನುಷ್ಯರು ಸಿಗಲಿಲ್ಲವೇ?ಏನು ಮಾತಾಡುತಿದ್ದಿಯಾ?"
ಏಲಿಯನ್ ಹೇಳಿದ,
“ನಾನು ಪಾಕಿಸ್ತಾನದಲ್ಲಿ ಒಬ್ಬ ಪಾಕಿಸ್ತಾನಿಯನ್ನು ಕಂಡೆ, ಅಮೇರಿಕಾದಲ್ಲಿ ಒಬ್ಬ ಅಮೇರಿಕನ್, ಭಾರತದಲ್ಲಿ ಒಬ್ಬ ಭಾರತೀಯ, ಲಂಕಾದಲ್ಲಿ ಒಬ್ಬಲಂಕನ್, ಬ್ರಿಟನ್‌ನಲ್ಲಿ ಒಬ್ಬ ಬ್ರಿಟೀಷ್.”
ಮುಂದುವರೆದು ಹೇಳಿದ,
“ನಾನು ಒಬ್ಬ ಹಿಂದೂ, ಮುಸಲ್ಮಾನ, ಯಹೂದಿ, ಕ್ರೈಸ್ತ, ನಾಸ್ತಿಕ ಇವರನ್ನು ಭೇಟಿ ಮಾಡಿದೆ. ಆದರೆ ನನಗೆ ಭೂಮಿಯಲ್ಲಿ ಮನುಷ್ಯನೇ ಕಾಣಲಿಲ್ಲ!”
(ವಿಸೂ: ಇದನ್ನು ಹಾಸ್ಯವೆಂದಾದರು ಪರಿಗಣಿಸಿ, ಇಲ್ಲ ವಿಷಾದ ಅಂತ ಆದರೂ ಪರಿಗಣಿಸಿ, ಆದರೆ ನನಗನ್ನಿಸುವದರ ಮಟ್ಟಿಗೆ ಇದು ನಗ್ನ ಸತ್ಯ. ಹುಸಿ ರಾಷ್ಟ್ರೀಯತೆಯನ್ನು ಹುಟ್ಟು ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ ಹಾಗೂ ರಾಜಕಾರಣಿಗಳಿಂದ ಈ ಭೂಮಿಯಲ್ಲಿ ಮನುಷ್ಯರೇ ಇಲ್ಲದಂತಾಗುತ್ತಿದ್ದಾರೆ, ಅಲ್ಲವೇ? )

No comments:
Post a Comment