ಶಾಂತಿಸಾಗರ/ಸೂಳೆಕೆರೆ - ಏಷ್ಯಾದ ಅತಿದೊಡ್ಡ ಮಾನವ (ಸ್ತ್ರೀ) ನಿರ್ಮಿತ ಕೆರೆ



ನೂರು ವರ್ಷಗಳ ಹಿಂದಿನ ಸೂಳೆಕೆರೆಯ ಚಿತ್ರಕ್ಕಾಗಿ ಇಲ್ಲಿ ನೋಡಿ.



Source:http://www.indianaturewatch.net/displayimage.php?id=7060

ಶಾಂತಿಸಾಗರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿದೆ. ದಾವಣಗೆರೆಯಿಂದ ೪೦ ಕಿ.ಮೀ. ದೂರದಲ್ಲಿದೆ. (ರಾಜ್ಯ ಹೆದ್ದಾರಿ ಸಂ. ೬೫ ಮತ್ತು ೪೮ ).
ಇದು ಭಾರತದ ಅತಿದೊಡ್ಡ ಮಾನವನಿರ್ಮಿತ ಕೆರೆ ಎನ್ನಲಾಗಿದೆ.

೧೯೮೦ ರ ತನಕ ಇದನ್ನು ಸೂಳೆಕೆರೆ ಎಂದು ಕರೆಯಲಾಗುತ್ತಿತ್ತು.

ಎರಡು ಗುಡ್ಡಗಳ ನಡುವೆ ೨೪೬೬ ಹೆಕ್ಟೇರ್ ವ್ಯಾಪ್ತಿಯಲ್ಲಿ ಇದನ್ನು ಕಟ್ಟಲಾಗಿದೆ. ಕೆರೆಯ ಸರಾಸರಿ ಆಳ ೫ ಮೀಟರ್ ಇದ್ದು, ಕೆಲವೆಡೆ ೯ ಮೀಟರ್ ವರೆಗೆ ಆಳವಿದೆ. ೪೫ ಕಿ. ಮೀ. ಸುತ್ತಳತೆಯ ಕೆರೆಯ ಉದ್ದ ೧೬ ಕಿ.ಮೀ.ವಿದ್ದು, ಸುಮಾರು ೨೮೭೬ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.

ಕೆರೆಯ ಇತಿಹಾಸವೂ ಕುತೂಹಲಕರವಾಗಿದೆ. ಕೆರೆಯಿದ್ದೆಡೆ ಹಿಂದೆ ಪಟ್ಟಣವೊಂದಿತ್ತಂತೆ; ೧೨ನೇ ಶತಮಾನದಲ್ಲಿ ಅಲ್ಲಿನ ರಾಜ ವಿಕ್ರಮರಾಯನ ಮಗಳು ಶಾಂತವ್ವ ಹೊತ್ತುಮೀರಿ ರಾತ್ರಿ ತಿರುಗಾಡುವ ಸ್ವಭಾವದವಳಂತೆ. ರಾಜನಾದ ತಂದೆಯು ಒಮ್ಮೆ ಹಿಂಬಾಲಿಸಿದಾಗ ಅವಳ ಅನೈತಿಕ ಸಂಬಂಧ ತಿಳಿಯಿತಂತೆ. ಅವಳನ್ನು ಸೂಳೆಯೆಂದು ಕರೆದು, ಬೈದು, ಅವನು ಊರನ್ನೇ ತ್ಯಜಿಸಿದನಂತೆ. ನಾಚಿಕೆ ತುಂಬಿದ ಶಾಂತವ್ವ ಕೆರೆಯೊಂದನ್ನು ಕಟ್ಟಿದಾಗ ಅದು ಬಹಳ ಬೇಗ ತುಂಬಿಬಿಟ್ಟು ಪಟ್ಟಣವನ್ನೇ ಮುಳುಗಿಸಿತಂತೆ.

ಇನ್ನೊದು ಕತೆಯ ಪ್ರಕಾರ ರಾಜಕುಮಾರಿ ಸೂಳೆ ಶಾಂತವ್ವನಿಗೆ ಕೆರೆ ಕಟ್ಟುವ ಸ್ಪೂರ್ತಿ ಬಂದದ್ದು ಶರಣ ಸೊನ್ನಲಿಗೆ ಸಿದ್ದರಾಮನಿಂದವಂತೆ. ಕೆರೆಯ ಕೆಲಸ ಮುಗಿದ ಮೇಲೆ ಶಾಂತವ್ವ ಪ್ರಾಯಶ್ಚಿತ್ತವೆಂದು ಕೆರೆಯಲ್ಲಿ ಹಾರಿ ಸತ್ತಳಂತೆ.

ಸುತ್ತಲೂ ಎಲ್ಲೂ ಕೈಗಾರಿಕೆಗಳು ಇಲ್ಲದಿರುವುದರಿಂದ ಹಾಗೂ ಹೆಚ್ಚಿನ ಪ್ರಚಾರವೂ ಇಲ್ಲವಾದ್ದರಿಂದ ಕೆರೆಯ ನೀರು ಕಲ್ಮಶರಹಿತವಾಗಿದೆ.

No comments: