ನನ್ನ ಜೀವನದ ಮೊಟ್ಟ ಮೊದಲ ಗೀತೆಯನ್ನು ಬರೆದ ಜೀವನದ ನಲ್ಮೆಯ ಗೆಳತಿಯೇ. ನಿನ್ನ ಮರೆಯಲಾಗದ ಕ್ಷಣಗಳನ್ನು ನೆನಸಿ ಕೊಂಡರೆ, ಮನಸ್ಸು ಹುಮ್ಮನಸ್ಸಿನಿಂದ ಆನಂದವನ್ನು ಪಡೆಯುತ್ತದೆ. ನೀ ಇಲ್ಲದ ಕ್ಷಣ ಬರಡಾದ ಸಮಚಿತ್ತವಿಲ್ಲದ ಮಾರ್ಧನಿಯಿದಂತೆ - ಆನಂದ ನಂದನ
ಎಂದು ಮರೆಯಲಾಗದ, ನನ್ನ ಮೌನವನ್ನು ಕೆರಳಿಸುವ, ನನ್ನನ್ನೇ ಮರೆಸುವ ಸೌಮ್ಯತೆಯನ್ನು ಸೃಷ್ಟಿಸುವ ಪ್ರೀತಿಯ ಅವಲೋಕನದ ಪ್ರತಿಬಿಂಬವೇ ನನ್ನ ಈ ಬಿತ್ತಿ ಪತ್ರದ ಪ್ರಯತ್ನ - ಆನಂದ ನಂದನ...ಪದವಿಗಳಿಸಲು ಒದ್ದಾಡಿದ ದಿನಗಳಲ್ಲಿ
ಬಾವಿಯೊಳಗಿನ ಕಪ್ಪೆಯೊಂದು ಹೊರ ಜಗತ್ತಿನ ಬೆಳಕಿಗೆ ಬಂದಾಗ, ಏನೋ ಒಂದು ತರಹದ ಕಸಿವಿಸಿ ಮೂಡಿದ ದಿನಗಳು.
ಏಕಾಂತವಾಗಿ ನನ್ನದೆಂಬ ಜಗತ್ತಿನಲ್ಲಿ ಸಂತೋಷದ ದಿನಗಳು.
ಮೂಡಿತು ಹೊಸ ಯೋಚನೆಗಳು, ಬೆಳಯಿತು ಸ್ನೇಹಿತರ ಬಳಗ.
ಮುಂದಿನ ಬೆಂಚಿನ ಮುದ್ದಿನ ವಿದ್ಯಾರ್ಥಿ ಎಂಬ ಹೆಗ್ಗಳಿಕೆ.
ಎಲ್ಲೋ ನನ್ನನ್ನೇ ನಾನು ಮರೆತು ಹೋದೆನೇ ಎಂಬ ಆತಂಕ.
ಓದಿನ ಜೊತೆಗೆ ಕಲೆ, ನಾಟಕ,ಸಂಗೀತದ ಒಡನಾಟ.
ಗೊತ್ತು ಗುರಿಯೀಲ್ಲದೇ, ಹಾರಾಡಿದ ದಿನಗಳು.
ವಸ್ತ್ವನ್ನು ಅರಿಯದ, ಕನಸೆಂಬ ಕಾಡಿನಲ್ಲಿ ಕಳೆದು ಹೋದ ದಿನಗಳು.
ಕೋಪ ತಾಪದ ಜೊತೆಗೆ ಪ್ರೀತಿಯೆಂಬ ಕನಸಿನ ಹುಡುಕಾಟ.
ಮನಸಿನ ಮದುರ ಭಾವನೆಯ ಜೊತೆಗಾಗಿ ಹುಚ್ಚು ಮನಸಿನ ಅಲೆದಾಟ.
ಗುರಿಯಜೋತೆಗೆ ಕೆಲಸದ ಹುಡುಕಾಟ.
ಕೆಲಸದಲ್ಲಿ ತೃಪ್ತಿ ಕಾಣದ ಜೀವ, ಬಟ್ಟೆಯಂತೆ ಕೆಲಸಗಳ ಬದಲಾವಣೆ.
ಕೊನೆಯ ಭೇಟಿ, ಕೊನೆಯ ಕಾಲೇಜು ದಿನ, ಮೊದಲ ಕೆಲಸ, ಮೊದಲ ಸಂಬಳ, ಮೊದಲ ಬೈಕು......ಅಜ್ಜಿಯಾ ಕೊನೆಯ ಕೈ ತುತ್ತು...ಎಂತ ಯಾತನಮಯ ಸಂತೋಷ.
ಪ್ರೀತಿಯೆಂಬ ಹಿತವಾದ ಹೃದಯದ ಬಾಷೆಯ ಕಲಿಯುವ ಮನದ ಆತುರ.ಕಳೆದು ಕೊಳ್ಳುವೇನೋ ನನ್ನ ಪ್ರೀತಿಯೆಂಬ ಗೊಂದಲ.
ಆದರು ಜೀವನದಲ್ಲಿ ನಂಬಿಕೆಎಂಬ ನೌಕೆಯಲ್ಲಿ ತೆವಳುವ ಆಸೆಯೊಂದಿಗೆ ಗುರಿಯ ಸೇರುವೆಡೆಗೆ.ನವಿರಾದ ಭಾವನೆಗಳೊಂದಿಗೆ ಬದುಕುವಾಸೆಯಾ ಹೊತ್ತವನು.
No comments:
Post a Comment