ಎನ್ನ ಕಾಡುತಿರುವಪ್ರಶ್ನೆಗಳು
ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?
ಅಂತವರಿಗೆ ಸಹಾಯ ಮಾಡುತ್ತಿನಿ ಅನ್ನು ಆದರೆ ಮಾಡಬ್ಯಾಡ ಅಷ್ಟೆ
ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?
ದೇವದಾಸ ಅಂತ ಅಂದ್ರೆ ದಿನಾ ಪಾರ್ಟಿ ತಾನೆ ಅದಕ್ಕೆ
ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?
ಗಡಿಯಾರಗಳೇ ಬದಲಾಗುತ್ತವೆ
ದೇವರು ಇದ್ದಾನೆ ಅಂದರೆ ಇದ್ದಾನೆ ಇಲ್ಲ ಅಂದರೆ ಇಲ್ಲ, ಯಾಕೀ ಗೊಂದಲ?
ಆಗಾಂತ ಹೇಳಿದ್ದಾವರ್ಯಾರು ? ನೀನೂ ಗೊಂದಲ ಅಂತ ಅಂದು ಕೊಂಡರೆ ನಿನ್ನ ಎದುರಿರುವವರಿಗೆಲ್ಲ ಗೊಂದಲವೇನೆ , ಇಲ್ಲ ಅಂದ್ರೆ ಇಲ್ಲ
ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?
ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ಫೇಲು
ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?
ಭೂಕೈಲಾಸ (ಕಾಸು ಇದ್ದರೂ,ಇಲ್ಲದಿದ್ದರೂ ಭೂಮಿ ಮ್ಯಾಲೆ ಇರುತ್ತೆವೆ)
ಹುಟ್ಟು ಸಾವಿನಾಚೆ ಏನಿದೆ?
ನೆನ್ನೆ ,ಇವತ್ತು ,ನಾಳೆಗಳ ಅನುಭವ ( ನೆನ್ನೆ --ಹುಟ್ಟು ,ಇವತ್ತು -- ನಾವಿರುವುದು, ನಾಳೆ -- ಸತ್ತ ಮ್ಯಾಲೆ)
ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?
ಹೌದು ... ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಯಾಕೆ ಬರೆ.
ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?
ನನ್ನದು ಅನ್ನೊ ಸ್ವಾರ್ಥ ಇರುತ್ತೆಲ್ಲ ಅದಕ್ಕೆ
ಹಣವಂತನಿಗೆ ರತ್ನಗಂಬಳಿ, ಬಡವನಿಗೆ ಯಾಕೆ ಕ್ಷುಲ್ಲಕ ಸ್ತಿತಿ?
ಒಬ್ಬನಿಗೆ ತಿನ್ನಲಿಕ್ಕೆ ಬದುಕಬೇಕು ಅಂತ ,ಇನ್ನೊಬ್ಬನಿಗೆ ಬದುಕಲಿಕ್ಕೆ ತಿನ್ನಬೇಕು ಅಂತ
ITಗೆ ಗೋಸ್ಕರ, ಇಂಡಿಯಾ ಬುದ್ದಿವಂತರ ಸಂತೆಯಾಯಿತು, ಅದಕ್ಕೆ ಮೊದಲು ನಾವೆಲ್ಲ ದಡ್ದರೆ?
ಸಂತೆ ಮೊದಲೂ ಇತ್ತು. ಸಂತೆಯಲ್ಲಿ ಗಿರಾಕಿಗಳಿರಲಿಲ್ಲ or ಸಂತೆ ನಡೆಯೊದು ಒಂದು ದಿನ ಅಲ್ಲವೆ or ಹಗಲು ಕಂಡ ಬಾವಿಗೆ ರಾತ್ರಿ ಬೀಳೊದು ಬ್ಯಾಡವೇ ....
ಅಮೇರಿಕಾ ಮಾತ್ರ ಯುದ್ದ ಮಾಡ ಬಹುದು, ನಾವೇಕೆ ಮಾಡುವ ಹಾಗಿಲ್ಲ?
ಮಾಡುತ್ತಿದ್ದೇವಲ್ಲಾ, ಆಂತರಿಕ ಯುದ್ಧ, ದಿನ ಪ್ರತಿದಿನ? ಈ ರಾಜಕಾರಣಿಗಳು ಮಾಡುತ್ತಿರುವುದೇನು, ಮತ್ತೆ?
ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?
ಪರಾವಲಂಬನೆ. ಸ್ವತಂತ್ರನಿಗೆ ಈ ಚಿಂತೆ ಇಲ್ಲ.
ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?
ನಮ್ಮನ್ನು, ನಮ್ಮದನ್ನು ಹೊಗಳಲು ಬೇರೆ ದೇಶದಿಂದ ಬರುತ್ತಿರುತ್ತಾರೆ.

No comments:
Post a Comment