ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ



ಸ್ಟೀವ್ ಜಾಬ್ಸ್' ಪ್ರಸಿದ್ದ ಗಣಕಯಂತ್ರ ಮತ್ತು ತಂತ್ರಾಂಶ ಉತ್ಪಾದಿಸುವ ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಹಾಗು ಹಾಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಇತ್ತೀಚೆಗೆ ಡಿಸ್ನಿ ಕಂಪೆನಿ ಪಿಕ್ಸಾರ್ ಕಂಪೆನಿಯನ್ನು ಕೊಂಡುಕೊಂಡ ನಂತರ ಸ್ಟೀವ್ ಜಾಬ್ಸ್ ಡಿಸ್ನಿಯ ಅತಿ ದೊಡ್ಡ ಪಾಲುಗಾರರಲ್ಲೊಬ್ಬರು.

ಮತ್ತೆ ಕತ್ತೆಲೆ ಸೇರಲು ತವಕ : ಇವರ ತಂದೆ ಹೈ ಸ್ಕೂಲ್, ತಾಯಿ ಕಾಲೇಜ್ ಬಿಟ್ಟವರಾಗಿದ್ದರು ಮೊದಲೇ ಸ್ಟೀವ್ ಅನೌಪಚಾರಿಕವಾಗಿ ಪಡೆದ ಮಗು. ಆದರೆ ಇವರ ಆಸೆ ಮಗನಾದರು ಪದವಿಧರ ಆಗಬೇಕೆಂದು ತೀರ್ಮಾನಿಸಿ ಮತ್ತು ಅವರ ಹಣಕಾಸು ಸ್ತಿತಿ ಕೂಡ ಉತ್ತಮವಾಗಿರಲ್ಲಿಲ್ಲದ ಕಾರಣ ದತ್ತು ಕೊಡಲು ತೀರ್ಮಾನಿಸಿದರು.

ನ್ಯಾಯವಾದಿ ದಂಪತಿಗಳಿಗೆ ದತ್ತು ಕೊಟ್ಟರು, ಆದರೆ ಗ್ರಹಚಾರ ಕಾದಿತ್ತು, ಸ್ಟೀವ್ನ ತಂದೆ ತಾಯಿಗಳು ಪದವಿಧರರಅಲ್ಲ ಎಂದು ತಿಳಿದ ಮೇಲೆ, ದತ್ತು ಪತ್ರವನ್ನು ಅನುರ್ಜಿತಗೊಳಿಸಿದರು. ನಂತರ ತಂದೆ ತಾಯಿಗಳು ಮುಂದೆ ಮಗನನ್ನು ಪದವಿಧರ ಮಾಡಲೇ ಬೇಕೆಂದು ತಿರ್ಮಾನ ಮಾಡಿದರು. ೧೭ ವರ್ಷದ ನಂತರ ಕಾಲೇಜ್ಗೆ ಸೇರಿಸಿದರು, ಆದರು ಅವರ ಯೋಗ್ಯತೆಗೆ ತಕ್ಕದಲ್ಲದ ಸ್ಟೇನ್ಸ್ಫೋರ್ಡ್ ವಿಶ್ವವಿದ್ಯಾನಿಲಯ ಸೇರಿಕೊಂಡರು, ಕುಟುಂಬದ ವರ್ಷ ಪೂರ್ತಿ ದುಡಿಮೆಯನ್ನು ಕೂಡಿಸಿದರು ಫಿಸನ್ನು ಬರಿಸಿಲಾಗದ ಸ್ಥಿತಿಯಲ್ಲಿದ್ದರು.
೬ ತಿಂಗಳ ನಂತರ ಕಾಲೇಜ್ ಬಿಟ್ಟರು. ಅನಂತರ ಏನು ಮಾಡಬೇಕಂತ ತಿಳಿಯದೆ ತೊಲಾಳಡಿದರು, ಇಷ್ಟವಲ್ಲದ ತರಗತಿಗೆ ಕೂಳಿತು ಕೊಳ್ಳಲು ಆಗದೆ, ಹೊರನಡೆದರು, ಮತ್ತೆ ಮನ ಇಚ್ಚಿಸುವ ಸ್ವತಂತ್ರ ದಕ್ಕಿತು. ಪೌಷ್ಟಿಕಾಂಶ ಬರಿತ ಒಂದು ಹೊತ್ತಿನ ಊಟಕ್ಕಾಗಿ ಒದ್ದಾಡುತಿದ್ದ ಸಮಯವದು ವಾಸವಿದ್ದ ಸ್ಥಳದಿಂದ ೧೭ ಕಿಲೋಮೀಟರ್ರ್ ದೂರವಿದ್ದ ಶ್ರೀ ಕೃಷ್ಣ ದೇವಸ್ತಾನಕ್ಕೆ ಪ್ರತಿ ಭಾನುವಾರ ಸಿಗುತ್ತಿದ್ದ ಪೌಷ್ಟಿಕಾಂಶ ಬರಿತ ಊಟಕ್ಕಾಗಿ ನಡೆದೇ ಹೋಗುತಿದ್ದರಂತೆ!!! ದೇವಸ್ತಾನದ ಆದ್ಯಾತ್ಮಿಕ ಗುರುವಿನ ದರ್ಶನದಿಂದ ಜೀವನದ ಸತ್ಯವನ್ನು ಮತ್ತು ಆದರ ವಿರುದ್ದ ನಡೆಯಬಾರದು ಎಂಬ ಸತ್ಯವನ್ನು ಮನಗೊಂಡರಂತೆ.

೨೦ ವಯಸ್ಸಿನಲ್ಲಿ ಆಪಲ್ ಕಂಪನಿಯನ್ನು ಶುರುಮಾಡಲು, ಸ್ಟೀವ್ಗೆ ಕತ್ತಲೆಯೇ ದಾರಿಯಾಯಿತು.

ಅಂದು ಕಾಲೇಜ್ ನಿಂದ ಹೊರನಡೆಯದೆ ಇದ್ದಿದ್ದರೆ, ಕ್ಯಾಲಿಗ್ರಫಿ ಕಲಿಯದೇ ಇದ್ದಿದ್ದರೆ, ಇಂದು ವಯಕ್ತಿಕ ಗಣಕಯಂತ್ರದಲ್ಲಿ(ಪರ್ಸನಲ್ ಕಂಪ್ಯೂಟರ್) ಆದ್ಬುತವಾದ ಟೈಪೋಗ್ರಫಿ ಸೇರಿಸಲು ಸಾದ್ಯವೇ ಆಗುತಿರಲ್ಲಿಲ್ಲ - ಸ್ಟೀವ್ ಜಾಬ್


ಕತ್ತಲೆಯಲ್ಲೇ ನನಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ಉಪಾಯ ಕಂಡಿದ್ದು, ಅದ್ದನ್ನೇ ಮೈಕ್ರೋಸಾಫ್ಟ್ ಕಾಪಿ ಮಾಡಿ ವಿಶ್ವದ್ಯಾಂತ ಹೆಸರು ಮಾಡಿದ್ದು.

ಕಾಲೇಜಿನ ದಿನದಲ್ಲಿ ಕಲಿತಿದ್ದ ಕ್ಯಾಲಿಗ್ರಫಿ, ಅವರಿಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ವಿನ್ಯಾಸಕ್ಕೆ ಸಹಾಯವಾಯಿತು.

"ಕತ್ತಲನ್ನು ಸೇರಲು ಭವಿಷ್ಯದ ಅವಶ್ಯಕತೆ ಇಲ್ಲ, ನಾನು ಬಂದ ಹಿನ್ನೋಟವೆ ನನಗೆ ಸಹಕಾರಿಯಾಯಿತು. ಮುಖ್ಯವಾಗಿ ನನ್ನ ಹೃದಯವನ್ನು ಕೇಳುವ, ಅದರಂತೆ ನಡೆಯುವ ದೈರ್ಯ ನನಗೆ ನನ್ನ ಕತ್ತಲಿನ ನಡಿಗೆಯೇ ದಾರಿದೀಪವಾಯಿತು" - ಸ್ಟೀವ್ ಜಾಬ್

"ಕತ್ತಲೆಯಲ್ಲಿ ನಡೆದ ದಿನಗಳು.....ಕಷ್ಟ ಮತ್ತು ಒಳ್ಳೆಯ ಸಮಯಗಳಲ್ಲಿ ಜೀವನವನ್ನು ಹೆದರಿಸುವ ಶಕ್ತಿಯನ್ನು, ನೆಟ್ಟ ಗುರಿಗೆ, ದಿಟ್ಟ ಹೆಜ್ಜೆಯನ್ನು ಇಡುವಂತೆ ಪ್ರೇರೇಪಿಸುತ್ತದೆ" - ಸ್ಟೀವ್ ಜಾಬ್

ಸ್ಟೀವ್ ಜಬ್ಸ್ನ್ ಜೀವನದ ಪ್ರೀತಿ ಮತ್ತು ನಷ್ಟ

ಸ್ಟೀವ್ ಜಬ್ಸ್ನ್ ಯಾವದನ್ನು ಪ್ರೀತಿಸಿದರು ಚಿಕ್ಕ ವಯಸ್ಸಿನಲ್ಲಿಯೇ ಅದನ್ನು ಪಡೆದರು, ೨೦ನೆ ವಯಸ್ಸಿನ್ನಲ್ಲಿ ಆಪಲ್ ಕಂಪ್ಯೂಟರ್'ನ ಸ್ಥಾಪನೆ ಮಾಡಿ ಕಷ್ಟ ಪಟ್ಟು ದುಡಿದರು, ಕಂಪನಿಯ ೧೦ ವರ್ಷದಲ್ಲೇ $ ೨ ಮಿಲಿಯನ್ ಕಂಪನಿ ಇಂದ $ ೨ ಬಿಲಿಯನ್ ಬೆಲೆಯುಳ್ಳ ಕಂಪನಿ ಮತ್ತು ೪೦೦೦ ಕೆಲಸಗಾರರು ಇರುವ ದೊಡ್ಡ ಮಟ್ಟಕ್ಕೆ ಕಟ್ಟಿದರು. ಅದೇ ಸಮಯದಲ್ಲಿ ಆದ್ಬುತ ಸೃಷ್ಟಿಯಾದ Macintosh ಆಪರೇಟಿಂಗ್ ಸಿಸ್ಟಂನ ಮಾರುಕಟ್ಟೆಗೆ ತಂದರು.

ಅವ್ರೆ ಸ್ಥಾಪಿಸಿದ ಕಂಪೆನಿಯಿಂದ ಅವ್ರೆನ್ನೇ ತೆಗೆದರೆ ಏನಾಗ ಬಹುದು?...ಅವರಿಗೆ ಆದೆ ಆಗಿತ್ತು . ಆಪಲ್ ಗ್ರೂಪ್ ಒಬ್ಬ ಅನುಭಾವಿ ಮತ್ತು ಬುದ್ದಿವಂತ ವ್ಯಕ್ತಿಯನ್ನು ಡೈರೆಕ್ಟರ್ಆಗಿ ನೇಮಿಸಿದರು, ಅವನು ಸ್ಟೀವ್ಗೆ ಸಹಾಯಕನಾಗಿ ಕೆಲಸ ಮಾಡಿದ ಮೊದಲ ವರ್ಷ ಕಂಪನಿ ಸಾರಿಯಾಗಿ ಲಾಭದಿಂದ ನಡೆಯಿತು. ನಂತರ ಕಂಪೆನಿಯ ನಷ್ಟದಲ್ಲಿ ಮುಳಿಗಿತ್ತು. ಅದರ ಹೊಣೆಯನ್ನು ಸ್ಟೀವ್ನ ಮೇಲೆ ಹಾಕಿ ಕಂಪನಿಯಿಂದ ಸಾರ್ವಜನಿಕರ ಮುಂದೆ ಹೊರಕಳಿಸಿದರು. ಆ ಸಮಯಕ್ಕೆ ಅವರ ವಯಸ್ಸು ೩೦ಗಿತ್ತು.

"ಈ ನೋವಿನಿಂದ ಮುಂದೆ ಏನು ಮಾಡಬೇಕೆಂದು ತೋಚದೇ, ಜೀವನದ ಗುರಿಯಿಂದ ಬೇರೆಡೆಗೆ ಹೋದಂತೆ ಅನುಭವವಾಯಿತು. ಅ ಸಮಯದ entrepreneurಗಳ ಪಟ್ಟಿಯಿಂದ ಹೊರನಡೆಯುವಂತೆ ಮಾಡಲಾಯಿತು.ಸಾರ್ವಜನಿಕರ ಮುಂದೆ ಸೋತೆಎಂಬ ನೋವು.
ಮತ್ತೆ ನಾನು ಏನು ಮಾಡಿದೆನೋ ಅದನ್ನ ಪ್ರೀತಿಸಿದೇನು, ನಾನು ಸೋತಿರಬಹುದು ಆದರೆ ಆದನ್ನ ಪ್ರೀತಿಸಿದೆನು...ನಿಧಾನವಾಗಿ ಮತ್ತೆ ನನ್ನ ಗುರಿಯೆಡೆಗೆ ನನ್ನ ಸೆಳೆತ ಶುರುವಾಯಿತು" - ಸ್ಟೀವ್ ಜಾಬ್ಸ್

ಘಟನೆಗಳು ಮತ್ತೆ ಮರುಕಳಿಸಿತು, ನನ್ನ ಯೋಚನೆಗಳಿಗೆ ಮತ್ತೆ ಜೀವ ಬಂತು, ಮತ್ತೆ ಹಿಂದೆ ನೋಡದೆ ಮತ್ತೆ ಹೊಸತನ್ನು ಮಾಡುವ ಹುಮ್ಮಸ್ಸು ಅವರನ್ನು ಮತ್ತೆ entrepreneurಆಗುವಂತೆ ಪ್ರೇರೇಪಿಸಿತು. ಆ ಸಮಯ ಮತ್ತೆ ಹೊಸ ತಂತ್ರಜ್ಞ್ಯಾನದ ಸೃಷ್ಟಿಗೆ ನಾಂದಿಯಾಯಿತು.

"ನನ್ನ ದೊಡ್ಡ ಸಾಧನೆಯು ಮತ್ತೆ ಹೊಸ ಆಲೋಚನೆಗೆ ದಾರಿಯಾಗಿ, ಹೊಸತನ್ನು ಮಾಡುವ ಹುಮ್ಮಸ್ಸು ನನ್ನಲ್ಲಿ ಮರುಕಳಿಸಿತು" - ಸ್ಟೀವ್ ಜಾಬ್ಸ್

ಮುಂದಿನ ೫ ವರುಷಗಳಲ್ಲಿ Next ತಂತ್ರಾಂಶದ ಮತ್ತು Pixaar ಎಂಬ ಅನಿಮೇಷನ್ ಕಂಪನಿಯನ್ನು ಸ್ತಾಪಿಸಿದರು,ಸುಂದರವಾದ ಹುಡುಗಿಯ ಜೊತೆ ಪ್ರೀತಿಯಾಗಿ ಮದುವೆಯಾದರು.

"Pixaar ಮೊದಲ ಅನಿಮೇಷನ್ ಚಲಚಿತ್ರ Toystory ತಯಾರಿಸಿತು ಮತ್ತು ಪ್ರಪಂಚದಲ್ಲೇ ಬೆಸ್ಟ್ ಅನಿಮೇಷನ್ ಸ್ಟುಡಿಯೊಆಗಿ ರೂಪಾಂತರಗೊಂಡಿತು". ಅದೃಷ್ಟ ಮತ್ತೆ ಸ್ಟೀವ್ ಜಾಬ್ಸ್ರ ಹಿಂದೆ ಬಿದ್ದಿತು, Next ಕಂಪನಿಯನ್ನು ತನ್ನದಾಗಿಸಿಕೊಂಡು ಆಪಲ್ ಮತ್ತೆ ಅವರನ್ನು ನಿರ್ದೇಶಕರಾಗಿ ನೇಮಿಸಿತು.

ಆಪಲ್ ನಲ್ಲಿ ಮತ್ತೆ ಹೊಸ ಆವಿಷ್ಕಾರದ ದಿನಗಳು ಪ್ರಾರಂಭವಾಹಿತು, ಅಲ್ಲಿ ಕಂಡು ಹಿಡಿದ ತಂತ್ರಜ್ನ್ಯಾನ ಆಪಲ್ ಮುಂದಿನ ಬೆಳೆವಣಿಗೆಗೆ ದಾರಿಯಾಯಿತು. ಆಪಲ್ ನಿಂದ ಹೊರ ಬರದಿದ್ದರೆ ಇದ್ದರೆ, ಐಪಾಡ್, ಐಫೋನ್....ಹೀಗೆ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತರಿರಲಿಲ್ಲ.("ರೋಗಿ ಯಾವ ಆಹಾರ ಬೇಕೆಂದು ವೈದ್ಯರಿಗೆ ಮಾತ್ರ ಗೊತ್ತಲ್ಲವೇ ")

"ಜೀವನದಲ್ಲಿ ಕಷ್ಟಗಳು ಬಂಡೆಯಂತೆ ಕಂಡರೂ, ನಂಬಿಕೆಯನ್ನು ಕಳೆದು ಕೊಳ್ಳಬಾರದು. ಆದನ್ನೇ ಪ್ರೀತಿಸಿದೇ, ನಂಬಿಕೆಗಳೇ ನನಗೆ ಹಿಂದಕ್ಕೆ ತಳ್ಳದೇ, ಮುನ್ನಡೆಗೆ ಶಕ್ತಿಯಾಯಿತು. ಏನು ಮಾಡುತ್ತಿರೋ ಮತ್ತು ಸಿಗೊತ್ತೋ ಪ್ರೀತಿಸಿ ಅದನ್ನೇ ಮಾಡಬೇಕು, ನಾವು ಪ್ರೀತಿಸಿದನ್ನೇ ಹುಡುಕಬೇಕು, ನಂಬಿದನ್ನೇ ಮಾಡಬೇಕು, ಇದೆ ಸತ್ಯ ಮತ್ತು ನಿತ್ಯದ ದೊಡ್ಡ ಸಾಧನೆಗೆ ಮಾರ್ಗ. ಕೆಲಸಗಳು ನಮ್ಮ ಜೀವನದ ದೊಡ್ಡ ಸಮಯವನ್ನೇ ನುಂಗುತ್ತದೆ, ಆದರೆ ನಮಗೆ ಇಷ್ಟವಾಗುವ ಕೆಲಸವೇ ನಮಗೆ ಸಂತೋಷ ಕೊಡುತ್ತದೆ. ಪ್ರೀತಿಸುವ ಕೆಲಸವೇ ಸಂತೋಷ ಕೊಡುವುದು. ಇನ್ನು ನಿಮಗೆ ಸಂತೋಷವಾಗುವ ಕೆಲಸ ಸಿಕ್ಕಿಲ್ಲವೇ, ಸೂಕ್ಷ್ಮವಾಗಿ ಹುಡುಕಿ ಕಂಡಿತ ಸಿಗುತ್ತದೆ, ನಿತ್ರಾಣ ಗೊಳ್ಳಬೇಡಿ. ಇವ್ವೆಲ್ಲವು ಹೃದಯದ ವಿಷಯ, ನೀವು ಕಂಡುಕೊಂಡಾಗ ಮಾತ್ರ ದಕ್ಕುತ್ತವೆ. ಯಾವುದೇ ಸಂಬಂಧಗಳು ವರುಷದಿಂದ ವರುಷಕ್ಕೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಹಾಗೆ, ಹುಡುಕುತ್ತಾ ಇರಿ, ಸುಸ್ತಾಯಿತು ಎಂದು ಸುಮ್ಮನಿರ ಬೇಡಿ, ಒಂದು ದಿನ ಖಂಡಿತ ಸಿಕ್ಕೇ ಸಿಗುತ್ತದೆ " - ಸ್ಟೀವ್ ಜಾಬ್ಸ್

ಸಾವಿನ ನಿಜವಾದ ಬಣ್ಣದ ಅರ್ಥ

ನನ್ನ ೧೭ನೆ ವಯಸ್ಸಿನಲ್ಲಿ, ಒಂದು ವಾಕ್ಯನ್ನು ಓದಿದೆ..."ನಾಳೆಯೇ ಕೊನೆಯೇ ಎಂಬಂತೆ ಬದುಕಿದರೆ, ಕೊನೆಗೆ ಒಂದು ದಿನ ಕಂಡಿತ ನೀವೇ ಸರಿಯಾಗುತ್ತಿರ"...ಇದು ನನ್ನ ಮೇಲೆ ಆಗಾಧವಾದ ಪರಿಣಾಮವನ್ನು ಬೀರಿತು, ಅವತ್ತಿನಿಂದ ೩೩ ವರುಷಗಳು ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತು ಕೊಂಡು ಕೇಳಿ ಕೊಳ್ಳುತ್ತೇನೆ " ಇವತ್ತೇ ನನ್ನ ಕೊನೆಯಾದರೆ, ನಾನು ಏನು ಮಾಡ ಬೇಕು?ಇವತ್ತು ಏನು ಮಾಡಬೇಕು?....ಯಾವಾಗಲು ಉತ್ತರ "ಏನು ಇಲ್ಲ" ಎಂಬದು ಸರಣಿ ದಿನಗಳಲ್ಲಿ ನನ್ನ ಕಾಡುತ್ತಾ ಇತ್ತು. ನನಗೆ ಗೊತ್ತು ನಾನು ಏನಾದರು ಬದಲಾವಣೆ ತರಬೇಕೆಂದು.

ನಾನು ಇಂದೇ ಸಾಯುತ್ತೇನೆ ಎಂದು ಅರ್ಥ ಮಾಡಿಕೊಂಡ ನಂತರ ಬೇರೆ ಬೇರೆ ನಿರ್ದಾರಗಳನ್ನು ತೆಗೆದು ಕೊಳ್ಳಲು ಸಹಾಯವಾಯಿತು. ಬಾಹ್ಯ ಆಸಕ್ತಿಗಳು(ಆಸೆ), ಸೋಲುತ್ತೇನೆ ಎಂಬ ಭಯ, ಕಿನ್ನತೆ...ಮುಂತಾದ ವಿಷಯಗಳು ಸಾವಿನ ಮುಂದೆ ನಶ್ವರ, ಬದುಕುವುದೊಂದೇ ಸತ್ಯ. ನಾನು ಸಾಯುತ್ತೇನೆ ಎಂಬ ವಿಷಯದಿಂದ ನಾನು ಏನು ಕಳೆದು ಕೊಂಡೆ ಎಂಬುದನ್ನು ತಡೆಯಲು ಅವಕಾಶವಾಯಿತು. ನೀನು ಆಗಲೇ ಬೆತ್ತಲೆ, ಅದ್ದರಿಂದ ನಿನ್ನ ಹೃದಯದಿಂದ ನಿರ್ದಾರ ತೆಗೆದುಕೊಳ್ಳದಿರಲು ಯಾವುದೇ ಕಾರಣವಿಲ್ಲ.

ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು, ವೈದ್ಯರು ನನಗೆ ಇನ್ನು ೬ ತಿಂಗಳಿನಲ್ಲಿ ಸಾಯುತ್ತೇನೆ ಎಂದು ಹೇಳಿ.....ನಿಮ್ಮ ಮನಗೆ ಹೋಗಿ ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಇನ್ನು ೧೦ ವರ್ಷಗಳು ವರೆಗೆ ನಾನು ಬದುಕುವುದಿಲ್ಲ, ಕೇವಲ ೩ ರಿಂದ ೬ ತಿಂಗಳು ಅಂಥ ಹೇಳಿ, ನಿಮ್ಮ ಮುಖ್ಯವಾದ ಕೆಲಸಗಳನ್ನು ಮುಗಿಸಿಕೊಂಡು ಬಿಡಿ ಎಂದು ಹೇಳಿ ಕುಟುಂಬದ ಭಾವನೆಗಳಿಗೆ ತೊಂದರೆಯಾಗದಿರಲಿ ಎಂದು ವೈದ್ಯರು ನನ್ನನ್ನು ಸಾವಿನ ಸಾಲಲ್ಲಿ ನಿಲ್ಲಿಸಲು ತುದಿಗಾಲಲ್ಲಿ ನಿಂತ್ತಿದ್ದರು. ಸತ್ಯವೇನೆಂದರೆ "ಶುಭಂ" ಹೇಳಲಿ ಎಂದು.

ಸಾವು ಎನ್ನುವುದು ಒಂದು "ಬೌದ್ದಿಕವಾದ", ಯಾರು ಸಾಯುದಕ್ಕೆ ಇಷ್ಟಪಡುವುದಿಲ್ಲ, ಸ್ವರ್ಗಕ್ಕೆ ಸತ್ತು ಹೋಗಬೇಕೆಂದು ಯಾರು ಯೋಚಿಸುವುದಿಲ್ಲ. ಯಾರು ಕೂಡ ಸಾವಿನಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ, ಸತ್ಯಕ್ಕೆ ಕಾರಣವೇನೆಂದರೆ ಸಾವು ಎನ್ನುವುದು ಜೀವನದ ಅವಿಷ್ಕಾರವೇ ಸರಿ, ಇದು ಜೀವನದ ಬದಲಾವಣೆಯ ಮಾರ್ಗ, ನಮ್ಮಹಳೆ ಕೊಳೆಯನ್ನು ತೆಗೆದು ಹೊಸ ಜಿವನಕ್ಕೆ ಮಾರ್ಗವನ್ನು ನೀಡುತ್ತದೆ. ನಿಮಗೆ ನೀವು ಹೊಸಬರಂತೆ ಕಾಣಿಸಬಹುದು, ಕಾಲ ಹೋದಂತೆ ನೀವು ಕೂಡ ಹಳಬರೇ ಆಗುತ್ತಿರಿ. ಇದು ನಿಮಗೆ ನಾಟಕೀಯವೆನಿಸಿದರು, ಕಷ್ಟ ಕಠೋರ ಸತ್ಯ.

ನಿಮ್ಮ ಸಮಯ ಚಿಕ್ಕದು, ಬೇರೆಯವರ ಜೀವನದಲ್ಲಿ ಸಮಯವನ್ನು ಕಳೆಯಬೇಡಿ. ಬೇರೆಯವರ ಅಭಿಪ್ರಾಯದ ಉತ್ತರದಲ್ಲಿ ಬದುಕಬೇಡಿ, ಯಾಕೆಂದರೆ ಅದು ನಮ್ಮ ಚಿಂತನೆಗೆ ಶಾಪವಿದ್ದಂತೆ. ನಿನ್ನ ಅಂತರಾಳದ ಮಾತಿಗೆ ಬೆಲೆಯನ್ನು ಕಂಡುಕೋ, ಹೊರತು ಬೇರೆಯವರ ಮಾತಿನ ಶಬ್ದದಲ್ಲಿ ನಿನ್ನನ್ನು ನೀನು ಮರೆಯಬೇಡ. ಎಂದಿಗೂ ನಿನ್ನ ಹೃದಯ ಮತ್ತು ಅಂತರಾಳದ ಮಾತಿನಂತೆ ನಡೆದುಕೊಳ್ಳುವ ಧರ್ಯವನ್ನು ಬೆಳೆಸಿಕೊ, ಬೇರೆಯವರಿಗೆ ನೀನು ಏನಾಗಬಹುದೆಂದು ತಿಳಿದಿರುತ್ತದೆ, ಇನ್ನು ಬೇರೆ ವಿಷಯಗಳು ಎರಡನೆಯದು.


ಕೊನೆಯಾದಾಗಿ ನಿಮಗೆಲ್ಲ ಒಂದು ವಿಷಯವನ್ನು ಹೇಳಬೇಕು "stay hungry, stay foolish"...ಈ ವಾಕವನ್ನು ನನಗೆ ಅವಾಗ ಅವಾಗ ಹೇಳಿಕೊಳ್ಳುತ್ತಾ ಇರುತ್ತೇನೆ....ಈಗ ನಿಮಗೇ ಅದನ್ನೇ ನನ್ನ ಶುಭಾಶಯವೆಂದು ಹೇಳುತ್ತೇನೆ......"stay hungry, stay foolish"

ನನ್ನ ಈ ಲೇಖನ stansford ವಿಶ್ವವಿದ್ಯಾನಿಲಯದ ಪದವಿ ಪುರಸ್ಕಾರ ಸಮಾರಂಭದಲ್ಲಿ ಸ್ಟೀವ್ ಜಾಬ್ಸ್ ನೀಡಿದ ಮುಖ್ಯ ಭಾಷಣದ ಕನ್ನಡೀಕರಣ

No comments: