ನಗುವಿನ ಹನಿ

ನಿನ್ನ ಅಹಾಲ್ದಕರ ನಗುವಿನ ನವಿರಾದ ಭಾವನೆಗಳನು
ತುಂಬಿದ ನನ್ನ ಹೃದಯಕ್ಕೆ ಸಂಭ್ರಮದ ಸಂದಿಗ್ದ ಸ್ತಿತಿ.
ಮರೆಯಲಾಗದ ಮುಂಜಾವಿನ ಮಂಜುವಿನಂತೆ
ನಳನಳಿಸುವ, ನಿನ್ನ ಆ ನಗುವಿನ ಭಿಗುವಿನ ವಾತಾವರಣವು ನನ್ನ ಬಂಧಿಸಿದೆ!
ಕಂಡರೂ ಕಂಡರಿಯದ ನಿನ್ನ ನಗುವಿನ ಹಾಡಿಗೆ ಬರೆದ
ನನ್ನ ಜೀವನದ ಹಾಡಿನ ಕೃತಿಯ!
ನಿನ್ನದೆನ್ನುವ ನಗುವಿನ ಸಿಂಚನದಿಂದ ಬಂಧಿಸಿದೆ ನನ್ನನು,
ಹೊರ ಬರಲು ನಿನ್ನೊಲುಮೆಯ ಮತ್ತದೇ ನಗುವಿಗಾಗಿ ಕಾಯುವಿಕೆ? - ಆನಂದ ನಂದನ

No comments: